Nandi Infrastructure Corridor Enterprise Ltd. (NICEL) and Bangalore Elevated Tollway Pvt. Ltd have increased the toll price. BETL toll hike ranging between 5.8% and 33.3% and NICE toll hike ranging between 10 % and 15%.
ನೈಸ್' ಮತ್ತು 'ಬಿಇಟಿಎಲ್' ಕಂಪೆನಿಗಳು ಟೋಲ್ ದರವನ್ನು (ರಸ್ತೆ ಶುಲ್ಕ ದರ) ಜುಲೈ 1ರಿಂದಲೇ ಅನ್ವಯವಾಗುವಂತೆ ಹೆಚ್ಚಳವಾಗಿದೆ. ನೈಸ್ ಆಡಳಿತ ಮಂಡಳಿ ನೈಸ್ ರಸ್ತೆಯ ಟೋಲ್ ದರಗಳನ್ನು ಶೇ10ರಿಂದ 15ರಷ್ಟು ಹೆಚ್ಚಿಸಿದೆ. ಬಿಇಟಿಎಲ್ ಶುಲ್ಕ ಶೇ 5.8 ರಿಂದ ಶೇ 33.3 ರತನಕ ಏರಿಕೆ ಕಂಡಿದೆ. ನೈಸ್ ರಸ್ತೆ- ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆಗಳನ್ನು ಕೂಡಿಸುತ್ತದೆ. ಬಿಇಟಿಎಲ್- ಅತ್ತಿಬೆಲೆ- ಎಲೆಕ್ಟ್ರಾನಿಕ್ ಸಿಟಿ, ನೆಲಮಂಗಲ ರಸ್ತೆಗಳಲ್ಲಿ ಟೋಲ್ ಹೊಂದಿದೆ.